ಉತ್ತಮ ಆಲೋಚನೆ ಹಾಗೂ ಸಾಮಾಜಿಕ ಕಾಳಜಿ ಹೊಂದಿರುವ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸುವ ಒಂದಷ್ಟು ಜನರಿರುವ ಕೇವಲ ಸಣ್ಣ ಗುಂಪಿನಿಂದಲೇ ಈ ಜಗತ್ತನ್ನು ಬದಲಾಯಿಸಲು ಸಾಧ್ಯವೇ ಎಂಬ ಸಂಶಯಬೇಡ; ಅಸಲಿಗೆ ಇದುವರೆಗೂ ಜಗತ್ತಿನಲ್ಲಿ ಕಂಡುಬಂದ ಮಹತ್ತರ ಬದಲಾವಣೆಗಳೆಲ್ಲವೂ ಆಗಿದ್ದು ಆ ಕಟಿಬದ್ಧ ಸಣ್ಣ ಗುಂಪಿನಿಂದಲೇ ಎಂಬುದನ್ನು ಮರೆಯದಿರಿ.

ಮಾರ್ಗರೇಟ್ ಮೀಡ್
photo

ನಮ್ಮ ಬೆಂಗಳೂರು ಫೌಂಡೇಶನ್- ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ನಗರ ಮತ್ತು ನಾಗರಿಕರ ಜೀವನಮಟ್ಟ ಸುಧಾರಣೆಯ ದೃಷ್ಟಿಯಿಂದ ಸಾಮೂಜಿಕವಾಗಿ ಜನಸಾಮಾನ್ಯರು ಸಮಾಜದಲ್ಲಿ ಚಟುವಟಿಕೆಂದ ಕೂಡಿರಬೇಕೆಂಬ ಮಹಾದಾಕಾಂಕ್ಷೆಯನ್ನಿಟ್ಟುಕೊಂಡು ಸ್ಥಾಪನೆಗೊಂಡಿರುತ್ತದೆ.

ಬೆಂಗಳೂರನ್ನು ಸ್ವಚ್ಛಂದ ನಗರವಾಗಿಸುವುದರೊಂದಿಗೆ ಸಾಮೂಹಿಕವಾಗಿ ಉತ್ತಮ ಜೀವನ ನಡೆಸಲು ಯೋಗ್ಯವಾಗಿಸುವಲ್ಲಿ ಬದಲಾವಣೆ ತರಲು ಮುಂಚೂಣಿಯಾಗಿರಬೇಕೆಂಬ ಹಂಬಲ ನಮ್ಮದು. ಅಲ್ಲದೆ, ಬೆಂಗಳೂರನ್ನು ಮತ್ತಷ್ಟು ಚಂದಗಾಣಿಸುವಲ್ಲಿ ಪಣತೊಡುವವರ ಧ್ವನಿಯಾಗಿ ನಿಲ್ಲಬೇಕೆಂಬ ಬಯಕೆಯೂ ನಮ್ಮದು. 

ಅಲ್ಲಲ್ಲಿ ಕಸದ ರಾಶಿ, ಕುಡಿಯುವ ನೀರಿನ ಸಮಸ್ಯೆ, ರಸ್ತೆಗಳಲ್ಲಿ ಗುಂಡಿ, ಅಸಮರ್ಪಕ ಅಸುರಕ್ಷಿತ ಕಟ್ಟಡ ಕಾಮಗಾರಿಗಳು ಸೇರಿದಂತೆ ನಮ್ಮ ನಗರ ಇಂದು ಹಲವಾರು ಸಮಸ್ಯೆಗಳ ಆಗರವಾಗಿದೆ. ಇವೆಲ್ಲವೂ ನಮ್ಮನ್ನು ಒಂದು ನೂತನ ಅನ್ವೇಷನಾ ಮಾರ್ಗೋಪಾಯದಿಂದ ಜನಸಮುದಾಯವನ್ನು ಒಂದು ಸೇರಿಸಿ  ಸಮರ್ಪಕ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಿ ನಗರವನ್ನು ಕಾರ್ಯೋನ್ಮುಕಗೊಳಿಸಲು ಸೂಚಿಸಿದೆ. ಅಲ್ಲದೆ, ಆಕಸ್ಮಿಕ ಪ್ರಕೃತಿ ವಿಕೋಪ ಹಾಗೂ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಅಗತ್ಯವಿರುವವರಿಗೆ ಅನುಕೂಲ ಮಾಡಿಕೊಡುವ ಮೂಲಕ ಸ್ಪಂದಿಸುವ ಅಗತ್ಯವಿದೆ. ಇವೆಲ್ಲವನ್ನು ಗಮನದಲ್ಲಿರಿಸಿಕೊಂಡು ನಾವು 2009 ರಿಂದ ಕಾಳಜಿಯುಳ್ಳ ವ್ಯಕ್ತಿಗಳ್ಳನ್ನು ಒಟ್ಟು ಸೇರಿಸಿಕೊಂಡು ಸದಾ ಚಟುವಟಿಕೆಯಿಂದ ಕಾರ್ಯನಿರ್ವಹಿಸಲು ವೇದಿಕೆಯನ್ನು ಸಿದ್ಧಪಡಿಸಿಕೊಂಡಿದ್ದೇವೆ. ನಮ್ಮ ಹಲವಾರು ಕಾರ್ಯಗಳು ಸಾಕಾರಗೊಳ್ಳಲು ಜವಾಬ್ದಾರಿಯುತ ಬೆಂಬಲ, ಸೃಜನಶೀಲಾತ್ಮಕ ಪಾಲುದಾರಿಕೆ, ವ್ಯವಸ್ಥಿತ ಆಂದೋಲನಗಳು ಕಾರಣವಾಗಿವೆ.  ನಮ್ಮ ವಿಶಿಷ್ಟ ಮಾದರಿಯ ಕಾರ್ಯವೈಖರಿಯಿಂದಾಗಿ ಬೆಂಗಳೂರಿನ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ತೊಡಕುಗಳು ಕಾನೂನಾತ್ಮಕವಾಗಿ, ಯೋಜನೆ ರೂಪಿಸುವ ಮುಖಾಂತರವಾಗಿ ಹಾಗೂ ಸಮಗ್ರ ದೃಷ್ಟಿಕೋನಗಳಲ್ಲಿ ವಿವಿಧ ಸಂಶೋಧನೆಗಳನ್ನು ಹಮ್ಮಿಕೊಳ್ಳುವ ಮುಖಾಂತರ ಸಾಕಷ್ಟು ಸುಧಾರಣೆಯಾಗಿದೆಯಲ್ಲದೆ ಸಮಾಜದ ಎಲ್ಲಾ ಸ್ಥರದ ವಿವಿಧ ಜನಸಮುದಾಯಗಳು ಒಟ್ಟಾಗಿ ಪಾಲ್ಗೊಂಡು ಗಮನಾರ್ಹ ಬದಲಾವಣೆ ತರಲು ಸಾಧ್ಯವಾಗಿದೆ.

ಈ ಎಲ್ಲಾ ಕಾರಣಗಳಿಂದ ಇವತ್ತು ಬೆಂಗಳೂರು ಹಲವಾರು ಉದಯೋನ್ಮುಕ ಉದ್ಯಮಗಳಿಗೆ ಬಹುಬೇಗನೇ ಪ್ರಗತಿ ಹೊಂದುವ ಕನಸಿನ ಪ್ರದೇಶವಾಗಿ ಮಾರ್ಪಟ್ಟಿರುವುದರೊಂದಿಗೆ ‘ನಮ್ಮ ಬೆಂಗಳೂರು’ ಸಂಸ್ಥೆಯ ಯಶೋಗಾತೆ ನಮ್ಮೆಲ್ಲರನ್ನೂ ಹೆಮ್ಮೆ ಪಡುವಂತೆ ಮಾಡಿದೆ. ಇದೇ ರೀತಿ ನಿಮ್ಮ ಅನಿರ್ಬಂಧಿತ ಬೆಂಬಲದಿಂದ ನಾವೆಲ್ಲರೂ ಇದೇ ಪ್ರಶಂಸೆಯನ್ನು ಮುಂದಿನ ತಲೆಮಾರಿಗೂ ಉಳಿಸಿ ಪೋಷಿಸಿಕೊಂಡು ಹೋಗಬೇಕಿದೆ.

Donate Now

ನಿಮ್ಮಅಳಿಲುಸೇವೆಯಿಂದಲೇ ಆರಂಭವಾಗಲಿ ಜಗತ್ತಿಗೆ ಕೊಡುಗೆ ನೀಡುವ ಕಾರ್ಯ. ಕನಿಷ್ಟ ಕೊಡುಗೆ ನಿಧಿ ನೀಡಿ.